ಅಭಯಗಿರಿ
	ಲಂಕೆಯ ಅನುರಾಧಪುರದಲ್ಲಿ ಬುದ್ಧಸ್ಥೂಪದ ಬಳಿ ಇರುವ ಒಂದು ಬೌದ್ಧಮಠ. ಇದನ್ನು ವಟ್ಟಗಾಮಿನಿ ಎಂಬ ಅರಸ ಕಟ್ಟಿಸಿದ. ಇದಕ್ಕಿಂತ ಮೊದಲೇ ಇಲ್ಲಿದ್ದ ಮಹಾವೀರಮಠದ ಭಿಕ್ಷುಗಳಿಗೂ ಅಭಯಗಿರಿ ಭಿಕ್ಷುಗಳಿಗೂ ಬಂದ ವೈಮನಸ್ಯದ ಫಲವಾಗಿ ಮಹಾಸೇನ ರಾಜ ಮಹಾವೀರಮಠವನ್ನು ಕೆಡವಿಸಿದನಾದರೂ (300) ಕಾಲಾಂತರದಲ್ಲಿ ಅದು ಮತ್ತೆ ತಲೆಯೆತ್ತಿ ಅಭಯಗಿರಿಯೊಡನೆ ಪ್ರಸಿದ್ಧಿ ಹೊಂದಿದೆ.	
										
(ಬಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ